`ರಾಮ್‌ಲೀಲಾ` ಟ್ರೈಲರ್ ಅನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ
Posted date: 02 Fri, Oct 2015 – 11:00:50 AM

ಮಸ್ತ್ ಮಜಾ ಮಾಡಿ, ಅಪ್ಪು ಪಪ್ಪು, ಸ್ನೇಹಿತರು ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಸೌಂದರ್ಯ ಜಗದೀಶ್ ಅವರ ಬಹು ನಿರೀಕ್ಷಿತ ಚಿತ್ರ ‘ರಾಮ್‌ಲೀಲಾ. ಚಿರಂಜೀವಿ ಸರ್ಜಾ ಮತ್ತು ಅಮೂಲ್ಯ ಜೋಡಿಯಾಗಿ ನಟಿಸಿರುವ ಈ ಚಿತ್ರದ ಟ್ರೈಲರ್ ಅನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ನಡೆದ ಈ ಸಮಾರಂಭದಲ್ಲಿ ಟ್ರೈಲರ್ ಬಿಡುಗಡೆ ಮಾಡಿದ ಛಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರದ ನಿರ್ಮಾಪಕರಾದ ಸೌಂದರ್ಯ ಜಗದೀಶ, ನಿರ್ದೇಶಕ ವಿಜಯಕಿರಣ್ ಹಾಗೂ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದರು.  ಈ ಟ್ರೈಲರ್ ನೋಡಿದರೇನೇ ಚಿತ್ರತಂಡದ ಎಫರ್ಟ್ ಏನೆಂದು ಅರ್ಥವಾಗುತ್ತದೆ. ಚಿತ್ರದ ಬಗ್ಗೆ ನಿರೀಕ್ಷೆಗಳೂ ಹುಟ್ಟುತ್ತವೆ. ಒಟ್ಟಾರೆಯಾಗಿ ರಾಮ್‌ಲೀಲಾ ಶತದಿನ ಆಚರಿಸಲಿ ಎಂದು ದರ್ಶನ್ ಮನದುಂಬಿ ಹಾರೈಸಿದರು.
ಈ ಸಮಾರಂಭದಲ್ಲಿ ಸೌಂದರ್ಯ ಜಗದೀಶ್, ಮಕ್ಕಳಾದ ಮಾಸ್ಟರ್ ಸ್ನೇಹಿತ್ ಮತ್ತು ಸೌಂದರ್ಯ, ನಿರ್ದೇಶಕ ವಿಜಯ್ ಕಿರಣ್ ಸೇರಿದಂತೆ ತಾಂತ್ರಿಕ ವರ್ಗ ಹಾಜರಿತ್ತು.
ರಾಮ್ ಲೀಲಾ ಹೆಸರು ಕೇಳಿದಾಗಲೇ  ಆಕರ್ಷಣೆ ಹುಟ್ಟುತ್ತದೆ. ರಾಮ್ ಲೀಲಾದ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋದು ಅಮೂಲ್ಯ ಹಾಗೂ ಚಿರಂಜೀವಿ ಸರ್ಜಾ. ಈ ಚಿತ್ರದ ಹಾಡುಗಳಿಗೆ ಅನೂಪ್ ರುಬಿನ್ಸ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಅತ್ಯುತ್ತಮವಾಗಿ ಸೆರೆ ಹಿಡಿದವರು ಕ್ಯಾಮೆರಾಮನ್ ಜೋ ನಿ ಹರ್ಷ. ಮುರಳಿ ಮಾಸ್ಟರ್ ನೃತ್ಯ ಸಂಯೋಜಿಸಿದರೆ, ರವಿ ವರ್ಮಾ ಸ್ಟಂಟ್ಸ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಸಂಜನಾ, ಸಾಧುಕೋಕಿಲ, ರಂಗಾಯಣ ರಘು, ರವಿ ಕಾಳೇ, ಚಿಕ್ಕಣ್ಣ, ರವಿಶಂಕರ್ ಗೌಡ ಹೀಗೆ ತಾರೆಗಳ ದಂಡೇ ಈ ಚಿತ್ರದಲ್ಲಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed